Saturday, May 12, 2007

Khara -Sev / ಖಾರ ಸೇವ್

ಖಾರ ಸೇವ್:

ಕಡ್ಲೆಹಿಟ್ಟು - ಒಂದು ಬಟ್ಟಲು
ನಿಂಬೆರಸ ಸ್ವಲ್ಪ
ಉಪ್ಪು ಸ್ವಲ್ಪ - ಅರ್ಧ ಚಮಚ
ಓಮಕಾಳು - ದೊಡ್ಡ ಚಮಚ
ಇಂಗು ಚಿಟಿಕೆ

ವಿಧಾನ:


ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ,ನೀರು ಹಾಕಿ ಕಲೆಸಿ,ಚೆನ್ನಾಗಿ ನಾದಿಕೊಳ್ಳಿ.ಚಕ್ಕುಲಿ ಒರಳಿಗೆ ದಪ್ಪ ಶ್ಯಾವಿಗೆಯ ಬಿಲ್ಲೆ ಹಾಕಿಕೊಳ್ಳಿ.
ನಂತರ ಹಿಟ್ಟನ್ನು ಚಕ್ಕುಲಿ ಒರಳಿಗೆ ಹಾಕಿ,ನೇರವಾಗಿ ಕಾದ ಎಣ್ಣೆಗೆ ಬಿಟ್ಟು,ಹೊಂಬಣ್ಣ ಬರುವವರೆಗೂ/ಬೆಂದಿದೆ ಎನಿಸಿದ ತಕ್ಷಣ ತೆಗೆದು,ಪೇಪರ್ ಟವಲ್ ಮೇಲೆ ಹಾಕಿ,ಎಣ್ಣೆ ಹೀರಿಕೊಳ್ಳುತ್ತದೆ. ನಂತರ ತಣ್ಣಗಾದ ಮೇಲೆ ಡಬ್ಬಕ್ಕೆ ತುಂಬಿರಿ. ಬೇಕಾದಾಗ ತಿನ್ನಬಹುದು. ಇದು ಪುರಿ ಜೊತೆ ಹಾಕಿಕೊಂಡು ತಿನ್ನಲು,ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.

No comments:

Popular Posts