Showing posts with label Seekarane/ಸೀಕರಣೆ. Show all posts
Showing posts with label Seekarane/ಸೀಕರಣೆ. Show all posts

Wednesday, December 30, 2009

Wheat Flour Laddu / Godhi Hittina Unde

ಗೋಧಿಹಿಟ್ಟಿನ ಉಂಡೆ:

ಗೋಧಿಹಿಟ್ಟು - ಒಂದು ಬಟ್ಟಲು
ಬೆಲ್ಲದಪುಡಿ- ಒಂದು ಬಟ್ಟಲು
ದ್ರಾಕ್ಷಿ ಮತ್ತು ಗೋಡಂಬಿ
ಏಲಕ್ಕಿ
ತುಪ್ಪ

ತಯಾರಿ:

ನಾನ್ ಸ್ಟಿಕ್ ಪ್ಯಾನ್/ ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಂಡು ಆ ಕಡೆ ಇಡಿ.
ಅದೇ ಬಾಣಲೆಯಲ್ಲಿ ಗೋಧಿಹಿಟ್ಟಿಗೆ ಸ್ವಲ್ಪ ತುಪ್ಪ ಹಾಕಿ ಹಸಿವಾಸನೆ ಹೋಗುವವರೆಗೂ ಅಂದರೆ ಹಿಟ್ಟಿನ ಬಣ್ಣ ತೆಳು ಕಂದು ಬಣ್ಣ ಬರುವವರೆಗೂ ಹುರಿದುಕೊಂಡು ಅದಕ್ಕೆ ಬೆಲ್ಲದಪುಡಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬೆರೆಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಅದೆಲ್ಲವನ್ನು ಕೈ ಬಿಡದೇ ತಳ ಹತ್ತದಂತೆ ಐದು ನಿಮಿಷ ಹುರಿದು, ಮತ್ತೆರಡು ಚಮಚ ತುಪ್ಪ ಹಾಕಿ ,ಬೆರೆಸಿ, ಒಲೆಯಿಂದ ಇಳಿಸಿ. ಇದನ್ನು ತಯಾರಿಸುವಾಗ ಹಾಲು / ನೀರು ಏನನ್ನು ಬೆರೆಸುವುದಿಲ್ಲ. ಹಿಟ್ಟು ಮತ್ತು ಬೆಲ್ಲ ಮಾತ್ರ. ಇದು ಸ್ವಲ್ಪ ತಣ್ಣಗಾದ ಬಳಿಕ (ತುಂಬಾ ತಣ್ಣಗಾಗಬಾರದು) ಇನ್ನೂ ಸ್ವಲ್ಪ ಬಿಸಿ ಇರುವಾಗಲೇ ತುಪ್ಪ ಅಥವಾ ಹಾಲಿನಲ್ಲಿ ಕೈಯನ್ನು ಸವರಿಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಉಂಡೆಯನ್ನು ತಯಾರಿಸಿಕೊಂಡು, ತಣ್ಣಗಾದ ಮೇಲೆ ಡಬ್ಬಿಯಲ್ಲಿ ಹಾಕಿಡಬಹುದು, ಸುಮಾರು ದಿನ ಚೆನ್ನಾಗಿ ಇರುತ್ತದೆ. ಇದು ತುಂಬಾ ಆರೋಗ್ಯಕರವಾದ ಉಂಡೆ. ಇದನ್ನು ತಯಾರಿಸಲು ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ

Wednesday, October 10, 2007

Karbujahannina Seekarane /Muskmelon delight

ಕರಬೂಜಹಣ್ಣಿನ ಸೀಕರಣೆ:
ಬೇಕಾಗುವ ಸಾಮಗ್ರಿಗಳು:
ಕರಬೂಜಹಣ್ಣು
ಬೆಲ್ಲದಪುಡಿ ರುಚಿಗೆ
ಅವಲಕ್ಕಿ -2 ಟೇಬಲ್ ಚಮಚ
ಹಾಲು - 1/2 ಕಪ್
ತೆಂಗಿನಹಾಲು-1/2 ಕಪ್
ಏಲಕ್ಕಿಪುಡಿ- ಸ್ವಲ್ಪ
ಜೇನುತುಪ್ಪ-2ಟೇಬಲ್ ಚಮಚ

ವಿಧಾನ:
ಕರಬೂಜ ಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಅವಲಕ್ಕಿ,ಬೆಲ್ಲದಪುಡಿ,ತೆಂಗಿನಗಟ್ಟಿಹಾಲು,ಹಾಲು,ಏಲಕ್ಕಿಪುಡಿ ಮತ್ತು ಜೇನುತುಪ್ಪವನ್ನು ಹಾಕಿ, ಚೆನ್ನಾಗಿ ಬೆರೆಸಿ, ಸರ್ವ್ ಮಾಡಿ. ತಣ್ಣಗೆ ಇಷ್ಟಪಡುವವರು ಫ್ರಿಡ್ಜ್ ನಲ್ಲಿಟ್ಟು ತಿನ್ನಬಹುದು.

Sunday, May 20, 2007

Mango delight/ MaavinaHannina Seekarane

ಮಾವಿನಹಣ್ಣಿನ ಸೀಕರಣೆ:

ಬೇಕಾಗುವ ಸಾಮಗ್ರಿಗಳು:

ಮಾವಿನಹಣ್ಣು
ಸಕ್ಕರೆ ರುಚಿಗೆ
ಹಾಲು/ಮಿಲ್ಕ್ ಮೆಯ್ಡ್- 1/2 ಕಪ್
ತೆಂಗಿನಹಾಲು-1/2 ಕಪ್
ಏಲಕ್ಕಿಪುಡಿ-ಸ್ವಲ್ಪ
ಜೇನುತುಪ್ಪ-2ಟೇಬಲ್ ಚಮಚ

ತಯಾರಿಸುವ ವಿಧಾನ:
ಮಾವಿನ ಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದನ್ನು ಒಂದು ಬಟ್ಟಲಿಗೆ ಹಾಕಿ, ಚೆನ್ನಾಗಿ ಕೈನಲ್ಲಿ ಹಿಸುಕಿ ಪೇಸ್ಟ್ ತರಹ ಮಾಡಿಕೊಳ್ಳಿ. ಇಲ್ಲವೆಂದರೆ ಬ್ಲೆಂಡರ್ ನಲ್ಲಿ ಪ್ಯೂರಿ ಮಾಡಿಕೊಳ್ಳಿ. ಏನಂದರೂ ಕೈನಲ್ಲಿ ತಯಾರಿಸಿದ್ದು ರುಚಿ ಹೆಚ್ಚು. ಆ ಮಾವಿನಹಣ್ಣಿನ ಪೇಸ್ಟ್ ಗೆ ಸಕ್ಕರೆ,ತೆಂಗಿನಗಟ್ಟಿಹಾಲು,ಹಾಲು,ಏಲಕ್ಕಿಪುಡಿ ಮತ್ತು ಜೇನುತುಪ್ಪವನ್ನು ಹಾಕಿ, ಚೆನ್ನಾಗಿ ಬೆರೆಸಿ, ಸರ್ವ್ ಮಾಡಿ. ತಣ್ಣಗೆ ಇಷ್ಟಪಡುವವರು ಫ್ರಿಡ್ಜ್ ನಲ್ಲಿಟ್ಟು ತಿನ್ನಬಹುದು.
*ಅವಲಕ್ಕಿ ಬೇಕಾದರೆ ಸೇರಿಸಿಕೊಳ್ಳಬಹುದು.
*ಬೇಕೆನಿಸಿದರೆ ದ್ರಾಕ್ಷಿ, ಗೋಡಂಬಿ ಕೂಡ ಬೆರೆಸಿಕೊಳ್ಳಬಹುದು.

Popular Posts