ಗೋಳಿ ಬಜೆ:
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು - ಒಂದು ಬಟ್ಟಲು
ಮೊಸರು - ಒಂದು ಬಟ್ಟಲು/ ಕಲೆಸಲು ಬೇಕಾಗುವಷ್ಟು
ಸಕ್ಕರೆ ಪುಡಿ - ಅರ್ಧ ಚಮಚಸೋಡ- ಚಿಟಿಕೆ
ಉಪ್ಪು- ರುಚಿಗೆ ಬೇಕಾಗುವಷ್ಟು
ಎಣ್ಣೆ - ಕರಿಯಲು
ತಯಾರಿಸುವ ವಿಧಾನ:
ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ.
ಮೈದಾಗೆ ಸೋಡಾ ಪುಡಿ,ಉಪ್ಪು,ಸಕ್ಕರೆಪುಡಿ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಮೊಸರು ಹಾಕಿ ಗಟ್ಟಿಯಾಗಿ ಕಲೆಸಿ.ತುಂಬಾ ತೆಳ್ಳಗೆ ಇರಬಾರದು, ಇಡ್ಲಿ ಹಿಟ್ಟಿಗಿಂತ ಗಟ್ಟಿ ಇರಬೇಕು. ಕೈನಲ್ಲಿ ತೆಗೆದುಕೊಂಡು ಬಿಡುವಂತಿರಬೇಕು.
ಎಣ್ಣೆ ಕಾದ ನಂತರ ಕಲೆಸಿದ ಮಿಶ್ರಣವನ್ನು ಕೈನಲ್ಲಿ ತೆಗೆದುಕೊಂಡು ಒಂದೊಂದಾಗಿ ಚಿಕ್ಕದಾಗಿ ಗುಂಡಗೆ ಎಣ್ಣೆಯಲ್ಲಿ ಬಿಡಿ. ಬೋಂಡಾ ತರಹ ಹಾಕಿ, ಬಂಗಾರದ ಬಣ್ಣ ಬರುವವರೆಗೆ ಕರಿದು, ತೆಗೆಯಿರಿ, ಪೇಪರ್ ಟವಲ್ ಮೇಲೆ ಹಾಕಿ, ಸಾಸ್ ಅಥವ ಚಟ್ನಿ ಜೊತೆ ಸರ್ವ್ ಮಾಡಿ.
No comments:
Post a Comment