Friday, March 4, 2016

ರವೆಉಂಡೆ - Rava Unde / Sooji Laddu

ಮಹಾಶಿವರಾತ್ರಿ ಹಬ್ಬದ ಶುಭಾಷಯಗಳು.
ಮಹಾಶಿವರಾತ್ರಿ ಹಬ್ಬದ ಶುಭಾಷಯಗಳೊಂದಿಗೆ ರವೆಉಂಡೆ ತಯಾರಿಸುವ ಲಿಂಕ್ ಅನ್ನು ತಿಳಿಸಲಾಗಿದೆ, 

ಹಾಲಿನ ಪುಡಿಯ ಬದಲು ಸ್ವಲ್ಪ ಹಾಲನ್ನು ಬೆರೆಸಿ ಉಂಡೆ ತಯಾರಿಸಿಕೊಂಡು ಹಬ್ಬದ ಸಿಹಿಯನ್ನು ಸವಿಯಿರಿ.
Rave Unde - Click this link:
ರವೆಉಂಡೆ :

RAVA UNDE, SOOJI LADDU


SHIVARATRI HABBADA SHUBHASHAYAGALU

Wednesday, March 2, 2016

Adige Recipes-ಅಡಿಗೆ ಸವಿರುಚಿ: ರಾಗಿ ಮುದ್ದೆ: Raagi Mudde

Adige Recipes-ಅಡಿಗೆ ಸವಿರುಚಿ: ರಾಗಿ ಮುದ್ದೆ: Raagi Mudde

ಈರುಳ್ಳಿ ಟಮೋಟ ಚಟ್ನಿ: Onion Tomato chutney

ಈರುಳ್ಳಿ  ಟಮೋಟ ಚಟ್ನಿ:

ಬೇಕಾಗುವ ಸಾಮಗ್ರಿಗಳು:

1. ಈರುಳ್ಳಿ- 2
 2. ಟೊಮೆಟೊ- 4-5
3. ಹಸಿಮೆಣಸಿನ ಕಾಯಿ- 2
4. ಉಪ್ಪು- ರುಚಿಗೆ ತಕ್ಕಷ್ಟು
5. ಅಚ್ಚ ಖಾರದ ಪುಡಿ- 1 ಟೀಚಮಚ
6. ಎಣ್ಣೆ- 1 ಟೀಚಮಚ
7. ಸಾಸಿವೆ- 1 ಟೀಚಮಚ

ಮಾಡುವ ವಿಧಾನ :

1. ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
2. ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ.
3. ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಉಪ್ಪು ಮತ್ತು ಖಾರದ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
 4. ಟೊಮೆಟೊ ನೀರು ಬಿಟ್ಟುಕೊಳ್ಳುವುದರಿಂದ ನೀರು ಹಾಕುವ ಅಗತ್ಯವಿಲ್ಲ. ಇದನ್ನು ನುಣ್ಣಗೆ ರುಬ್ಬಿಕೊಳ್ಳಿ.
5. ನಂತರ ಪಾತ್ರೆಗೆ ಹಾಕಿಕೊಳ್ಳಿ.
6. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಹಾಕಿ ಇದನ್ನು ಚಟ್ನಿಗೆ ಹಾಕಿ ಕಲಸಿ. ಈರುಳ್ಳಿ ಟೊಮೆಟೊ ಚಟ್ನಿಯನ್ನು ದೋಸೆ, ಚಪಾತಿ ಅಥವ ಅನ್ನದೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

Popular Posts