ಹಲಸಂದೆಕಾಳು ಉಸಲಿ:
ಸಾಮಗ್ರಿಗಳು:
ಹಲಸಂದೆಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ನೀರು ಬೇಯಿಸಲು ಬೇಕಾಗುವಷ್ಟು
ವಿಧಾನ:
ಹಲಸಂದೆಕಾಳುಗಳನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ ಅರ್ಧ ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ, ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ , ಬೇಯಿಸಿರುವ ಕಾಳನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ, ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ, ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.
*ಹಲ್ಸಂದೆ ಕಾಳುಗಳು ಎರಡು ಬಣ್ಣಗಳಲ್ಲಿ ಸಿಗುತ್ತದೆ, ಕೆಂಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ಹೈಬ್ರೀಡ್ ಕಾಳುಗಳು ಅಷ್ಟು ರುಚಿ ಇರುವುದಿಲ್ಲ. ಇಂಗ್ಲೀಷ್ ನಲ್ಲಿ ಬ್ಲಾಕ್ ಐ ಬೀನ್ ಎಂದು ಕರೆಯುತ್ತಾರೆ. ಈ ಕಾಳುಗಳು ಆರೋಗ್ಯಕ್ಕೂ ಉತ್ತಮ. ಇದನ್ನು ಮೊಳಕೆ ತೆಗೆದು ಸಾರಿಗೆ ಬಳಸಬಹುದು, ಇಲ್ಲವೆಂದರೆ ಹಾಗೆ ನೇರವಾಗಿಯೇ ಕಾಳುಗಳನ್ನು ಬೇಯಿಸಿಕೊಂಡು ಸಾರನ್ನು ತಯಾರಿಸಬಹುದು. ಅನ್ನ, ಮುದ್ದೆ, ಚಪಾತಿ,ರೊಟ್ಟಿಗಳಿಗೆ ಚೆನ್ನಾಗಿರುತ್ತದೆ.
Showing posts with label ಹಲಸಂದೆಕಾಳು ಉಸಲಿ. Show all posts
Showing posts with label ಹಲಸಂದೆಕಾಳು ಉಸಲಿ. Show all posts
Thursday, August 28, 2014
Subscribe to:
Posts (Atom)
Popular Posts
-
ತರಕಾರಿ ಸಾಗು ಅಥವ ಕೂಟು ಎಲ್ಲವುದಕ್ಕು ಹೊಂದಿಕೊಳ್ಳುವಂತಹದ್ದು. ಅಂದರೆ ಇದನ್ನು ದೋಸೆ, ಚಪಾತಿ,ಪರೋಟ,ರೊಟ್ಟಿ,ಪೂರಿ ಮತ್ತು ಅನ್ನದ ಜೊತೆಯಲ್ಲಿ ತಿನ್ನಬಹುದು. ಜೊತೆಯಲ್ಲ...
-
ಆಲೂ ಪರೋಟ: ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗೆಡ್ಡೆ-ಒಂದು ಬಟ್ಟಲು ಅಚ್ಚ ಖಾರದ ಪುಡಿ-ಕಾಲು ಚಮಚ ಉಪ್ಪು ರುಚಿಗೆ ತಕ್ಕಷ್ಟು ಚಾಟ್ ಮಸಾಲಾ-ಕಾಲು ಚಮಚ ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: ಟಮೋಟ - ಅರ್ಧ ಕೆ.ಜಿ ಈರುಳ್ಳಿ - ಎರಡು ಬೆಳ್ಳುಳ್ಳಿ - ಹತ್ತು ಎಸಳು ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು ಹುಣಸೆಹಣ್ಣು -...
-
ಬಿಸಿಬೇಳೆ ಭಾತ್ ಪುಡಿ: ತಯಾರಿಸಲು ಬೇಕಾಗುವ ಸಾಮಗ್ರಿಗಳು: ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು ಧನಿಯ- ಎರಡು ಚಮಚ ಮೆಂತ್ಯ -ಅರ್ಧ ಚಮಚ ಜೀರಿಗೆ-ಒಂದು ಚ...
-
ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ. ಗೋಳ...
-
ರಸಂ ಪುಡಿ / ರಸಂ ಪೌಡರ್ ಬೇಕಾಗುವ ಪದಾರ್ಥಗಳು: ಒಣ ಮೆಣಸಿನ ಕಾಯಿ - ಒಂದು ಬಟ್ಟಲು ಧನಿಯಾ ಬೀಜ - ಅರ್ಧ ಬಟ್ಟಲು ಜೀರಿಗೆ - ಒಂದು ದೊಡ್ಡ ಚಮಚ ಮೆಣಸು - ಒಂದು ದೊಡ...
-
ಈರುಳ್ಳಿ ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: 1. ಈರುಳ್ಳಿ- 2 2. ಟೊಮೆಟೊ- 4-5 3. ಹಸಿಮೆಣಸಿನ ಕಾಯಿ- 2 4. ಉಪ್ಪು- ರುಚಿಗೆ ತಕ್ಕಷ್ಟು 5. ಅಚ್ಚ ಖಾರದ ಪ...