ಹೆಸರುಬೇಳೆ ಹಲ್ವ:
ಹೆಸರುಬೇಳೆ - ಒಂದು ಕಪ್
ಸಕ್ಕರೆ - ಒಂದು ಕಪ್
ಕೋವಾ - ಕಾಲು ಕಪ್
ತುಪ್ಪ - ಕಾಲು ಕಪ್
ಏಲಕ್ಕಿ ಪುಡಿ ಸ್ವಲ್ಪ
ಗೋಡಂಬಿ ಮತ್ತು ಬಾದಾಮಿ
ತಯಾರಿಸುವ ರೀತಿ:
ಮೊದಲಿಗೆ ಹೆಸರು ಬೇಳೆಯನ್ನು ಸ್ವಲ್ಪ ಅಂದರೆ ಹಸಿ ವಾಸನೆ ಹೋಗುವಂತೆ ಹುರಿದುಕೊಳ್ಳಿ. ಹುರಿದ ಬೇಳೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ.
ಸಕ್ಕರೆ ಮತ್ತು ನೀರನ್ನು ಹಾಕಿ ಒಂದೆಳೆ ಪಾಕವನ್ನು ತಯಾರಿಸಿಕೊಂಡು ಅದಕ್ಕೆ ಹುರಿದಿಟ್ಟುಕೊಂಡಿರುವ ಹೆಸರುಬೇಳೆ ಪುಡಿಯನ್ನು ಹಾಕಿ ಮತ್ತು ಕೋವವನ್ನು ಸೇರಿಸಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಒಂದೆರಡು ಚಮಚ ತುಪ್ಪವನ್ನು ಸೇರಿಸಿ, ತಿರುಗಿಸುತ್ತಿರಿ, ಹಲ್ವ ಹದಕ್ಕೆ ಬಂದ ತಕ್ಷಣ ಇಳಿಸಿ, ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಬೆರೆಸಿ. ರುಚಿಯಾದ ಹೆಸರುಬೇಳೆ ಹಲ್ವ ತಯಾರಾಗುತ್ತದೆ. ಇದು ತಂಪು, ಬೇಸಿಗೆಗಾಲದಲ್ಲಿ ಒಳ್ಳೆಯದು.
No comments:
Post a Comment