ಬೇಕಾಗುವ ಪದಾರ್ಥಗಳು:
ಒಣ ಮೆಣಸಿನ ಕಾಯಿ - ಒಂದು ಬಟ್ಟಲು
ಧನಿಯಾ ಬೀಜ - ಅರ್ಧ ಬಟ್ಟಲು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಒಂದು ದೊಡ್ಡ ಚಮಚ
ಮೆಂತ್ಯ - ದೊಡ್ಡ ಚಮಚದಲ್ಲಿ ಅರ್ಧ
ಕರಿಬೇವು - ಒಂದು ಬಟ್ಟಲು
ಅರಿಶಿಣ - ಒಂದು ಚಿಕ್ಕ ಚಮಚ
ಇಂಗು - ಒಂದು ಚಿಕ್ಕ ಚಮಚ
ಎಣ್ಣೆ - ಅರ್ಧ ಚಮಚ
ತಯಾರಿಸುವ ವಿಧಾನ:
ತಯಾರಿಸುವ ವಿಧಾನ:
ಬಾಣಲೆಗೆ ಮೆಣಸಿನಕಾಯಿ, ಧನಿಯಾ, ಜೀರಿಗೆ,ಮೆಂತ್ಯ,ಮೆಣಸು ಮತ್ತು ಕರಿಬೇವು ಹಾಕಿ ಕಡಿಮೆ ಉರಿಯಲ್ಲಿ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಹುರಿಯಿರಿ, ಹೀಗೆ ಹುರಿದ ನಂತರ ಮೆಣಸಿನಕಾಯಿಯನ್ನು ಮುರಿದು ಪರೀಕ್ಷೆ ಮಾಡಿ, ಅದು ಗರಿಗರಿಯಾಗಿದ್ದು ಅದುಮಿದ ತಕ್ಷಣ ಮುರಿದುಕೊಂಡರೆ ಹುರಿದಿದ್ದು ಸಾಕು, ನಂತರ ಅದಕ್ಕೆ ಅರಿಶಿಣ/ಅರಿಶಿನ , ಇಂಗು ಮತ್ತು ಎಣ್ಣೆ ಹಾಕಿ, ಸ್ಟೌವ್ ಆರಿಸಿ, ಈಗ ಎಲ್ಲವನ್ನು ಚೆನ್ನಾಗಿ ಬೆರೆಸಿ. ಸ್ವಲ್ಪ ಹೊತ್ತು ಹಾಗೆಯೇ ತಣ್ಣಗಾಗಲು ಬಿಡಿ. ಬಾಣಲೆಯಲ್ಲಿರುವ ಸಾಮಗ್ರಿಗಳು ತಣ್ಣಗಾದ ಬಳಿಕ, ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.ಘಮ ಘಮ ರಸಂ ಪುಡಿ ಸಿದ್ಧವಾಗುತ್ತದೆ.
ನಂತರ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಒಂದು ದಿನ ಶ್ರಮವಹಿಸಿ ಪುಡಿಯನ್ನು ತಯಾರಿಸಿಟ್ಟುಕೊಂಡರೆ, ಬೇಕಾದಾಗ ರುಚಿಯಾದ ರಸಂ ಅನ್ನು ತಯಾರಿಸಬಹುದು.
ನಂತರ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಒಂದು ದಿನ ಶ್ರಮವಹಿಸಿ ಪುಡಿಯನ್ನು ತಯಾರಿಸಿಟ್ಟುಕೊಂಡರೆ, ಬೇಕಾದಾಗ ರುಚಿಯಾದ ರಸಂ ಅನ್ನು ತಯಾರಿಸಬಹುದು.
* ಒಣ ಮೆಣಸಿನಕಾಯಿಯನ್ನು ಅರ್ಧಕ್ಕೆ ಮುರಿದು ಬಟ್ಟಲಿಗೆ ಹಾಕಿ, ಒಂದು ಪ್ರಮಾಣದಲ್ಲಿ ಮೆಣಸಿನಕಾಯಿ ತೆಗೆದುಕೊಂಡರೆ, ಅದರ ಅರ್ಧದಷ್ಟು ಪ್ರಮಾಣದಲ್ಲಿ ಧನಿಯಾ ಬೀಜಗಳನ್ನು ತೆಗೆದುಕೊಳ್ಳಿ.
* 2:1 ಪ್ರಮಾಣದಲ್ಲಿ ಮೆಣಸಿನಕಾಯಿ ಮತ್ತು ಧನಿಯಾ ತೆಗೆದುಕೊಳ್ಳಿ.
* ಖಾರವು ಮೆಣಸಿನಕಾಯಿಯನ್ನು ಅವಲಂಬಿಸಿರುತ್ತದೆ. ಏಕೆಂದರೆ ಒಂದೊಂದು ಮೆಣಸಿನಕಾಯಿ ಒಂದೊಂದು ರೀತಿಯ ಕಾರವನ್ನು ಹೊಂದಿರುತ್ತದೆ. ಬಣ್ಣ ಸಹ. ಆಗಾಗಿ ನಿಮಗೆ ಸರಿ ಎನಿಸಿದ ಮೆಣಸಿನಕಾಯಿಗಳನ್ನು ಹಾಕಿ.
* ಬಣ್ಣ ಕೊಡುವ ಮೆಣಸಿನಕಾಯಿ, ಕಾರ ಕೊಡುವ ಮೆಣಸಿನಕಾಯಿ,ಬ್ಯಾಡಗಿ ಮೆಣಸಿನಕಾಯಿ ಹೀಗೆ ಮೆಣಸಿನಕಾಯಿಯಲ್ಲಿ ನಾನಾ ವಿಧವಿರುವುದರಿಂದ ನಿಮಗೆ ಬೇಕಾದ ಮೆಣಸಿನಕಾಯಿ ಬಳಸಿ. ಇಲ್ಲವೆಂದರೆ ಎರಡು ಅರ್ಧ-ಅರ್ಧ ಹಾಕಬಹುದು.
* ಬಣ್ಣ ಕೊಡುವ ಮೆಣಸಿನಕಾಯಿ, ಕಾರ ಕೊಡುವ ಮೆಣಸಿನಕಾಯಿ,ಬ್ಯಾಡಗಿ ಮೆಣಸಿನಕಾಯಿ ಹೀಗೆ ಮೆಣಸಿನಕಾಯಿಯಲ್ಲಿ ನಾನಾ ವಿಧವಿರುವುದರಿಂದ ನಿಮಗೆ ಬೇಕಾದ ಮೆಣಸಿನಕಾಯಿ ಬಳಸಿ. ಇಲ್ಲವೆಂದರೆ ಎರಡು ಅರ್ಧ-ಅರ್ಧ ಹಾಕಬಹುದು.
* ಕರಿಬೇವು ಸಹ ಇಲ್ಲಿ ಮುಖ್ಯವಾಗಿರುತ್ತದೆ.
* ಪದಾರ್ಥಗಳನ್ನು ಹುರಿಯುವಾಗ ಸರಿಯಾದ ಹದದಲ್ಲಿ ಹುರಿಯಿರಿ, ಸೀದಿಸಬೇಡಿ. ತಣ್ಣಗಾದ ನಂತರವೇ ಮಿಕ್ಸಿಗೆ ಹಾಕಬೇಕು.
4 comments:
Its really good recipe... awesome..!!!
Its good one.. awesome recipe..!!!
awesome recipe!!!!
Thank you very much!
Post a Comment