
ಗೋಡಂಬಿ ಬರ್ಫಿ:
ಬೇಕಾಗುವ ಸಾಮಗ್ರಿಗಳು:
ಗೋಡಂಬಿ - ಒಂದು ಕಪ್
ಸಕ್ಕರೆ - ಒಂದು ಕಪ್/ರುಚಿಗೆ ತಕ್ಕಷ್ಟು
ಹಾಲು - ಅರ್ಧ ಕಪ್
ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್
ತುಪ್ಪ - ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ ಸ್ವಲ್ಪ
ತಯಾರಿಸುವ ವಿಧಾನ:
ಗೋಡಂಬಿಯನ್ನು ಪುಡಿ ಮಾಡಿಕೊಳ್ಳಿ.
ಪಾತ್ರೆಗೆ ಸಕ್ಕರೆ ಮತ್ತು ಕಂಡೆನ್ಸ್ಡ್ ಮಿಲ್ಕ್ ಹಾಕಿ ಬೆರೆಸಿ,ಅದಕ್ಕೆ ಗೋಡಂಬಿ ಪುಡಿಯನ್ನು ಹಾಕಿ ಕೆದಕುತ್ತಿರಿ,ಸ್ವಲ್ಪ ಹೊತ್ತಿನ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಕೈ ಬಿಡದೇ ಚೆನ್ನಾಗಿ ಕೆದಕುತ್ತಿರಿ,ತಳ ಹಿಡಿಯದಂತೆ ತಿರುಗಿಸಿ,ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ,ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ತಿನ್ನಲು ಗೋಡಂಬಿ ಬರ್ಫಿ ತಯಾರಾಗುತ್ತದೆ.ಮಕ್ಕಳಿಗೆ ಪ್ರಿಯವಾದ ಗೋಡಂಬಿ ಬರ್ಫಿ ತಯಾರಾಗುತ್ತದೆ.
No comments:
Post a Comment