ಹಾಲಿನ ಪೇಡ/ದೂದ್ ಪೇಡ:
ಸಾಮಗ್ರಿಗಳು:
ಹಾಲಿನಪುಡಿ - ಎರಡು ಬಟ್ಟಲು
ಕಂಡೆನ್ಸ್ದ್ ಹಾಲಿನ ಟಿನ್ - ಒಂದು
ಬೆಣ್ಣೆ - ಅರ್ಧ ಬಟ್ಟಲು
ಏಲಕ್ಕಿ ಪುಡಿ
ವಿಧಾನ:
ಮೊದಲು ಬೆಣ್ಣೆಯನ್ನು ಕರಗಿಸಿ, ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ , ಹಾಲಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಗಂಟು ಆಗದಂತೆ ಕೈಯಾಡಿಸಿ, ಮಧ್ಯೆ ಮಧ್ಯೆ ತಿರುಗಿಸುತ್ತಿರಿ, ಅದು ಸ್ವಲ್ಪ ಗಟ್ಟಿಯಾದ ತಕ್ಷಣ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ . ತಳ ಬಿಟ್ಟು ಬರುತ್ತಿದೆ ಎನಿಸಿದಾಗ ಕೆಳಗಿಳಿಸಿ.
ನಿಮಗೆ ಬೇಕಾದ ಆಕಾರದಲ್ಲಿ ಪೇಡಗಳನ್ನು ತಯಾರಿಸಿ. ಇದು ತಯಾರಿಸಲು ತುಂಬಾ ಸುಲಭ,ಬೇಗ ಆಗುತ್ತದೆ ಮತ್ತು ರುಚಿಯಾಗಿಯೂ ಇರುತ್ತದೆ. ಮಕ್ಕಳಿಗಂತು ಬಲು ಇಷ್ಟವಾಗುತ್ತದೆ.
